Tuesday, 18 October 2016

Wishing team members by the President and the Chief Guests

Wishing team members by the President and the Chief Guests

Volley ball tournament was held by Chathrapathi Yuva

Volley ball tournament was held by Chathrapathi Yuva

President was felicitated by Vice President at Chathrapathi Yuva Sene inauguration

President was felicitated by Vice President at Chathrapathi Yuva Sene inauguration

The audience at the Chathrapathi Yuva Sene inauguration

The audience at the Chathrapathi Yuva Sene inauguration

Prize distribution to the winners by the President

Sri. Manjunath Naik was felicitated by presenting a memento by MLA Sri. K Gopal Poojari

Sri. Manjunath Naik was felicitated by presenting a memento by MLA Sri. K Gopal Poojari

Chathrapathi Yuva Sene Inauguration

Chathrapathi Yuva Sene Inauguration

ಛತ್ರಪತಿ ಯುವ ಸೇನೆ ಔದ್ಯೋಗಿಕ ಆಪ್ತಸಮಾಲೋಚನಾ ಕಾರ್ಯಗಾರ

ಬೈಂದೂರು:

ಶೈಕ್ಷಣಿಕ ಅಧ್ಯಯನ, ಶೋಧನೆ ಮತ್ತು ಉದ್ಯೋಗ ವ್ಯಕ್ತಿಯ ಬದುಕಿನ ಮಹತ್ತರ ಮೂರು ಹಂತಗಳು. ಕ್ರೀಯಾಶೀಲತೆ, ಕೌಶಾಲಾಭಿವೃದ್ಧಿ, ಸಂವಹನ ಮತ್ತು ಉದ್ಯೋಗದ ಬಗೆಗಿನ ಜ್ಞಾನ, ಹಾಗೂ ವೃತ್ತಿಮೌಲ್ಯಗಳನ್ನು, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ ಮೈಗೂಡಿಸಿಕೊಂಡರೆ ಉದ್ಯೋಗವೇ ನಿಮ್ಮ ಹಿಂದೆ ಬಂದು ನಿಲ್ಲುತ್ತದೆ ಎಂದು ಮಂಗಳೂರು ಎಸ್‌ಡಿ‌ಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಚಂದ್ರಲೇಖಾ ವಿ. ಹೇಳಿದರು.
ಛತ್ರಪತಿ ಯುವ ಸೇನೆಯು ಕುಂದಾಪುರ ತಾಲೂಕು ಮರಾಠಿ ವಿದ್ಯಾರ್ಥಿಗಳಿಗಾಗಿ ಬ್ಯೆಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಔದ್ಯೋಗಿಕ ಆಪ್ತಸಮಾಲೋಚನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾನವ ಸಂಪನ್ಮೂಲ ಹಿರಿಯ ವ್ಯವಸ್ಥಾಪಕ ನಂದಿಗದ್ದೆ ಸದಾಶಿವ ನಾಯ್ಕ ಮಾತನಾಡಿ, ಶೈಕ್ಷಣಿಕ ವಿಭಾಗದಲ್ಲಿನ ಸಾಧನೆಯೆ ಸಮುದಾಯದ ಬೆಳವಣಿಗೆಗೆ ಸಹಕಾರಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಇಲಾಖೆಗಳು ಮತ್ತು ಖಾಸಗಿ ವಲಯಗಳ ಸಮಗ್ರ ಪರಿಚಯ, ಔದ್ಯೋಗಿಕ ಮಾಹಿತಿ ಇಂದಿನ ಯುವಜನಾಂಗಕ್ಕೆ ನೀಡುವ ಅಗತ್ಯತೆ ಇದೆ. ಮಾಹಿತಿಯ ಕೊರತೆಯೆ ನಿರುದ್ಯೋಗವನ್ನ ಹುಟ್ಟುಹಾಕುತ್ತದೆ. ಆ ನಿಟ್ಟಿನಲ್ಲಿ ಇಂದಿನ ಕಾರ್ಯಕ್ರಮ ಮಹತ್ತರ ಹಾಗೂ ಅರ್ಥಪೂರ್ಣ ಎಂದರು.
ವೆಬ್ ಡಿಸೈನರ್ ರಮೇಶ್ ಅತ್ತಿಹೊಳೆ, ಹೆಚ್ ಆರ್ ವ್ಯವಸ್ಥಾಪಕ ಸಂತೋಷ ನಾಯ್ಕ ಕಂಚಿನಬೇರು, ಭಾಸ್ಕರ ನಾಯ್ಕ ಯಡಮೊಗೆ ಮತ್ತು ಮುಖ್ಯೋಪಧ್ಯಾಯ ಶೇಷು ಮರಾಠಿ ಉಪಸ್ಥಿತರಿದ್ದರು.
ಉದಯ ನಾಯ್ಕ ಕನ್ಕಿಮಡಿ ಸ್ವಾಗತಿಸಿ, ಮಂಜುನಾಥ ನಾಯ್ಕ ದಳಿ ವಂದಿಸಿದರು. ಪ್ರೋ. ರಘು ನಾಯ್ಕ ನಿರೂಪಿಸಿದರು. ನಂತರ ಸಂದಶನ ಎದುರಿಸುವ, ರೆಸ್ಯುಮಿ/ಸೀವಿ ತಯಾರಿಸುವ ಕುರಿತು ಮತ್ತು ವಿವಿಧ ಹುದ್ದೆ ಹಾಗೂ ಉದ್ಯೋಗಗಳನ್ನ ಪಡೆಯುವ ರಹದಾರಿಯ ಕುರಿತು ಮಾಹಿತಿ ನೀಡಲಾಯಿತು.